पूर्णप्रज्ञसंशोधनमन्दिरम्

पूर्णप्रज्ञविद्यापीठ, डा.श्री विश्वेशतीर्थस्वामीजी मार्ग , कत्तरिगुप्पे मेन् रोड् , बेङ्गलुरु - ५६००७०

ADARSH SHODH SAMSTHAN
Recognised Under Central Schemes Implemented Through
CENTRAL SANSKRIT UNIVERSITY, DELHI

Janmashatamanotsava of Sri Gururajacharya Pandurangi & Prof K.T Pandurangi

ಸಂಸ್ಕೃತ ಸಾಹಿತ್ಯದ ಮಹಾವಿದ್ವಾಂಸರಾದ ದಿವಂಗತ ಪ್ರೊ. K.T. ಪಾಂಡುರಂಗಿಯವರ ಹಾಗೆಯೇ ದಿವಂಗತ ವಿದ್ವಾನ್ ಗುರುರಾಜಾಚಾರ್ಯ ಪಾಂಡುರಂಗಿಯವರ ಜನ್ಮಶತಮಾನವನ್ನು ಉದ್ದೇಶಿಸಿ ಎರೆಡು ದಿನಗಳ ಕಾಲ ನಡೆಯುವ ಉತ್ಸವವು ಪೂರ್ಣಪ್ರಜ್ಞ -ವಿದ್ಯಾಪೀಠದಲ್ಲಿ ಜೂನ್ 17 ಪ್ರಾರಂಭಗೊಂಡಿದೆ. ಪರಮಪೂಜ್ಯ ಶ್ರೀಸುವಿದ್ಯೇಂದ್ರತೀರ್ಥರ ದಿವ್ಯೋಪಸ್ಥಿತಿಯಲ್ಲಿ ನಡೆದ ಪೂರ್ವಾಹ್ನದ (ಬೆಳಿಗ್ಗಿನ) ಕಾರ್ಯಕ್ರಮಗಳ ವಿವರಗಳು ಇಂತಿವೆ. ಪೂರ್ಣಪ್ರಜ್ಞ-ವಿದ್ಯಾಪೀಠದ ಅನೇಕ ವಿದ್ವಾಂಸರೂ , ವಿದ್ಯಾರ್ಥಿಗಳು ಹಾಗೇ ಅನೇಕ ಆಸ್ತಿಕರ ಸಮಕ್ಷದಲ್ಲಿ ಪರಮಪೂಜ್ಯ ಶ್ರೀಸುವಿದ್ಯೇಂದ್ರತೀರ್ಥರು ವೇದಘೋಷಗಳ ನಡುವೆ ದೀಪಪ್ರಜ್ವಾಲನೆ ಮಾಡುವು ಮೂಲಕ ಕಾರ್ಯಕ್ರಮವನ್ನು ಪ್ರಾರಂಭಿಸಿದರು. ಪೂರ್ಣಪ್ರಜ್ಞಸಂಶೋಧನಾ-ಮಂದಿರದ ನಿರ್ದೇಶಕರಾದ ಡಾ.ವೀರನಾರಾಯಣಾಚಾರ್ಯ ಪಾಂಡುರಂಗಿಯವರು ಸ್ವಾಮಿಗಳಿಗೆ ಮತ್ತು ನೆರೆದ ಎಲ್ಲಾ ವಿದ್ವಾಂಸರಿಗೆ ನಮಸ್ಕಾರಪೂರ್ವಕ ಸ್ವಾಗತವನ್ನು ಹೇಳಿ, ಪ್ರಾಸ್ತಾವಿಕ ಭಾಷಣವನ್ನು ಮಾಡಿದರು. ಅನಂತರ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯ ಹಾಗೂ ಪೂರ್ಣಪ್ರಜ್ಞಸಂಶೋಧನಾ-ಮಂದಿರಗಳ ಸಹಯೋಗದಲ್ಲಿ ಮುದ್ರಿತವಾದ ಅನೇಕ ಪುಸ್ತಕಗಳ ಲೋಕಾರ್ಪಣೆ ಸ್ವಾಮಿಗಳ ಕೈಯಿಂದ ನಡೆಯಿತು. ಅನಂತರ ಸ್ವಾಮಿಗಳು ತಮ್ಮ ಅನುಗ್ರಹ-ಸಂದೇಶವನ್ನು ನೀಡಿದರು. ಕಾರ್ಯಭಾರದಿಂದ ಸ್ವಾಮಿಗಳು ಹೊರಟರೂ ಅವರ ಅನುಗ್ರಹದಿಂದ ಸಭೆ ಮುಂದೆವರಿಯಿತು. ಸದಾ ಅನೇಕ-ಶಾಸ್ತ್ರಗಳ ಪಾಠ ಪ್ರವಚನಗಳಲ್ಲಿ ರತರಾದ ಈ ಮಹಾಪಂಡಿತರ ಈ ಉತ್ಸವದಲ್ಲಿ ಸಂದರ್ಭೋಚಿತ ಎನ್ನುವಂತೆ ಶಾಸ್ತ್ರ-ಘೋಷ್ಠಿ ಪ್ರಾರಂಭವಾಯಿತು. ಮಹಾಮಹೋಪಾಧ್ಯಾಯ ಪ್ರೊ.ಹರಿದಾಸಭತ್ತಾಚಾರ್ಯರ ಹಾಗೇ ವಿದ್ವಾನ್ ಶ್ರೀಧೀರೇಂದ್ರಾಚಾರ್ಯರ ಅಧ್ಯಕ್ಷತೆಯಲ್ಲಿ ನಡೆದ ಈ ಗೋಷ್ಠಿಯಲ್ಲಿ ಅನೇಕ ವಿದ್ವಾಂಸರೂ ತಮ್ಮ ತಮ್ಮ ವಿಷಯಗಳನ್ನು ಮಂಡಿಸಿದರು. ಮುಖ್ಯವಾಗಿ ವ್ಯಾಸರಾಜರು ರಚಿಸಿರುವ ತಾತ್ಪರ್ಯಚಂದ್ರಿಕಾ ಎನ್ನುವ ಗ್ರಂಥದಲ್ಲಿ ಹೇಳಿರುವ ವಿಷಯಗಳ ಬಗ್ಗೆ ಚರ್ಚೆ ನಡೆಯಿತು. ಎಲ್ಲ ವಿದ್ವಾಂಸರಿಗೆ ಹಾಗೆ ವಿದ್ಯಾರ್ಥಿಗಳಿಗೆ ಮುದನೀಡಿದ ಈ ಗೋಷ್ಠಿಯ ಸಮಾಪ್ತಿಯಿಂದಾಗಿ ಮೊದಲನೇ ದಿನದ ಮೊದಲನೆಯ ಅಧಿವೇಶನವು ಈರೀತಿಯಾಗಿ ಸಮಾಪ್ತಿಗೊಂಡಿತು.